ಅಕ್ರಿಯಾವಾದ 
ಬುದ್ಧನ ಸಮಕಾಲೀನನಾದ ಪುರಣ ಕಸ್ಸಪನೆಂಬುವನ ತತ್ತ್ವ. ನಿಜ ಹೇಳುವುದು, ದಾನ ಮಾಡುವುದು, ಸಂಯಮ-ಇವು ಒಳ್ಳೆಯವೂ ಅಲ್ಲ; ಸುಳ್ಳು ಹೇಳುವುದು, ಕದಿಯುವುದು, ಕೊಲೆ ಮಾಡುವುದು-ಇವು ಕೆಟ್ಟವೂ ಅಲ್ಲ. ಯಾವುದನ್ನೂ ಮಾಡದ ನಿಷ್ಕ್ರಿಯೆಯೇ ಸರಿಯಾದ ಮಾರ್ಗ ಎಂಬುದು ಇವನ ತತ್ತ್ವ.		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ